ಅಭ್ಯುದಯ ಮತ್ತು ನಿಶ್ರ್ಯೇಯಸ
	ಅಭಿವೃದ್ಧಿಗೆ ಕಾರಣವಾದ ಒಂದು ಶ್ರಾದ್ಧ. ನಾಂದೀಶ್ರಾದ್ಧವೆಂದೂ ಹೆಸರು. ಮಂಗಳಕಾರ್ಯಾರಂಭಕ್ಕೆ ಮೊದಲು ಇದನ್ನು ಮಾಡುವುದು ಇಂದೂ ಆಚರಣೆಯಲ್ಲಿದೆ. ಮಂಗಳಕರವೇ ಅಭ್ಯುದಯ. ಮೋಕ್ಷವೇ ನಿಶ್ಶ್ರೇಯಸ. ವಿಧ್ಯುಕ್ತಕರ್ಮಾನುಷ್ಠಾನದಿಂದ ಇಹದಲ್ಲಿ ಅಭ್ಯುದಯವೂ ಪರದಲ್ಲಿ ನಿಶ್ಶ್ರೇಯಸವೂ ಉಂಟಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಿದೆ. 		
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ